Country
Trending

ದೊಡ್ಡ ಪ್ರಹಾರದ ಮುನ್ಸೂಚನೆ ಕೊಟ್ಟರಾ ಮಾಜಿ ಸೇನಾ ಮುಖ್ಯಸ್ಥ?

ನವದೆಹಲಿ, ಮೇ 7: ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಉಗ್ರ ತಾಣಗಳ ಮೇಲೆ ಭಾರತ ದಾಳಿ (Operation Sindoor) ಮಾಡಿ 70ಕ್ಕೂ ಹೆಚ್ಚು ಉಗ್ರರನ್ನು ಕೊಂದು ಹಾಕಿದೆ. ಪಾಕಿಸ್ತಾನ ಕೂಡ ತಾನು ಭಾರತೀಯ ಜೆಟ್​​​ಗಳನ್ನು ಹೊಡೆದುರುಳಿಸಿ, ಕೆಲ ಭಾರತೀಯ ಸೈನಿಕರನ್ನು ಸೆರೆಹಿಡಿದಿರುವುದಾಗಿ ಹೇಳಿಕೊಂಡಿದೆ. ಇದೇ ವೇಳೆ, ಭಾರತದ ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ ಅವರು ಎಕ್ಸ್​​​ನಲ್ಲಿ ಹಾಕಿದ ಒಂದು ಪೋಸ್ಟ್ ಸಾಕಷ್ಟು ಕುತೂಹಲ ಕೆರಳಿಸಿದೆ. ಭಾರತದಿಂದ ಇನ್ನೂ ದೊಡ್ಡ ದಾಳಿ ನಡೆಯುವ ಸಾಧ್ಯತೆಯನ್ನು ತೆರೆದಿಟ್ಟಿದೆ.

ಜನರಲ್ ಮನೋಜ್ ನರವಣೆ ಅವರು ‘ಅಭಿ ಪಿಕ್ಚರ್ ಬಾಕಿ ಹೈ’ ಎಂದು ಒನ್​​ಲೈನರ್ ಅನ್ನು ಪೋಸ್ಟ್ ಮಾಡಿದ್ದಾರೆ. ಇದು ಬಿಟ್ಟು ಬೇರೇನೂ ಬರೆದಿಲ್ಲ. ಭಾರತದ ಮಿಲಿಟರಿಯಿಂದ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆದ ಬಳಿಕ ಈ ಪೋಸ್ಟ್ ಬಂದಿದೆ. ಭಾರತೀಯ ಸೇನೆ ಇನ್ನೂ ದೊಡ್ಡ ದಾಳಿ ಮಾಡುವ ಸಾಧ್ಯತೆ ಇದೆ ಎಂಬುದು ಅವರ ಈ ನಿಗೂಢ ಪೋಸ್ಟ್​​​ನ ಅರ್ಥವಿರಬಹುದೆ?

ಆಪರೇಷನ್ ಸಿಂದೂರ ಕಾರ್ಯಾಚರಣೆ ಇನ್ನೂ ಮೊದಲ ಹೆಜ್ಜೆಯಷ್ಟೇ, ಮುಂದೆ ಇನ್ನಷ್ಟು ಬರಲಿವೆ ಅನಿಸಿಕೆಗಳು ಹಿರಿಯ ಪತ್ರಕರ್ತರು ಮೊದಲಾದವರಿಂದ ಬರುತ್ತಿವೆ. ಪಾಕಿಸ್ತಾನ ತಾನು ಯಾವುದೇ ಪ್ರತಿದಾಳಿಗೆ ಸಿದ್ಧ ಎಂದು ಹೇಳಿಕೊಳ್ಳುತ್ತಿದೆ. ಭಾರತ ತನ್ನ ಕಾರ್ಯಾಚರಣೆ ನಿಲ್ಲಿಸಿದರೆ ತಾನೂ ಕೂಡ ಜವಾಬ್ದಾರಿಯುತವಾಗಿ ಪ್ರತಿಕ್ರಿಯೆ ನಿಲ್ಲಿಸುವುದಾಗಿ ಪಾಕ್ ಹೇಳಿದೆ.

ರಾತ್ರಿ 1 ಗಂಟೆಯ ಬಳಿಕ ಭಾರತದ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ ಸಂಘಟಿತರಾಗಿ ಆಪರೇಷನ್ ಸಿಂಧೂರ ನಡೆಸಿವೆ. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಲಷ್ಕರೆ ತೈಯಬಾ, ಹಿಜ್ಬುಲ್ ಮುಜಾಹಿದೀನ್ ಮತ್ತು ಜೈಷೆ ಸಂಘಟನೆಗಳಿಗೆ ಸೇರಿದ 9 ಸ್ಥಳಗಳ ಮೇಲೆ ನಿರ್ದಿಷ್ಟವಾಗಿ ಗುರಿ ಮಾಡಿ ಸ್ಟ್ರೈಕ್ ಮಾಡಲಾಗಿದೆ. ಕೆಲ ವರದಿಗಳ ಪ್ರಕಾರ 70ಕ್ಕೂ ಹೆಚ್ಚು ಉಗ್ರರು ಸತ್ತಿದ್ದಾರೆ. ಲಷ್ಕರೆ ಉಗ್ರರ ಹಫೀಜ್ ಸಯ್ಯದ್ ಅವರ ಕುಟುಂಬದ 10 ಮಂದಿ ಸದಸ್ಯರೂ ಸತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button