ಇತ್ತೀಚಿನ ಸುದ್ದಿ
Trending

ನಾಗಮಂಗಲ ಕಂದಾಯ ಇಲಾಖೆ ಭ್ರಷ್ಟಾಚಾರ ಬ್ರಹ್ಮಾಂಡಕ್ಕೆ ಕಡಿವಾಣ ಉಂಟೆ..?

ನಾಗಮಂಗಲ ಮೇ 23 ತಾಲೂಕಿನ ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಬ್ರಹ್ಮಾಂಡ ಎಂಬುದು ಸುಮ್ಮನೆ ಹೇಳುವ ಬದಲು ಸಾಕ್ಷಿಯಾಗಿ ತಾಲೂಕಿನ ಕಂದಾಯ ಇಲಾಖೆ ಅಧಿಕಾರಿಗಳು ಅಮಾನತ್ತಾಗಿರುವುದು ಸಾರ್ವಜನಿಕ ಗೊತ್ತಾಗಿದ್ದು ತಾಲೂಕಿನ ಆಡಳಿತಕ್ಕೆ ತಕ್ಷಣವೇ ಭ್ರಷ್ಟಾಚಾರ ಬ್ರಹ್ಮಾಂಡಕ್ಕೆ ಕಡಿವಾಣ ಆಗಬೇಕಾಗಿದ್ದು ತಾಲೂಕಿನ ಪ್ರಜ್ಞಾವಂತರ ಕೂಗಾಗಿದೆ.

ತಾಲೂಕಿನ ಆಡಳಿತ ಸೌಧ ಮುಂದೊಂದು ದಿನ ಭ್ರಷ್ಟಾಚಾರದ ಕೇಂದ್ರೀಕೃತವಾಗುವ ಮೊದಲೇ ತಾಲೂಕಿನ ಸಂಬಂಧಪಟ್ಟ ಆಡಳಿತದ ಅಧಿಕಾರಿಗಳು ಮೌನ ಹೆಜ್ಜೆಯಾಗಿದ್ದು ಸಾರ್ವಜನಿಕವಾಗಿ ಗೊತ್ತಿರುವ ವಿಷಯವಾಗಿದೆ.

ಕಂದಾಯ ಇಲಾಖೆಯಲ್ಲಿ ಹೊಸ ಕಡತಗಳನ್ನು ಸೃಷ್ಟಿ ಮಾಡಿ ಬೇರೊಬ್ಬರಿಗೆ ಮಾಡುವುದು ಇಂತಹ ಒಂದಲ್ಲ ಎರಡಲ್ಲ ಅನೇಕ ಸಂಗತಿಗಳು ನಡೆಯುತ್ತಿದ್ದು ಭ್ರಷ್ಟಾಚಾರದ ವ್ಯವಸ್ಥೆ ಇನ್ನು ಅನೇಕ ಇಲಾಖೆಗಳಲ್ಲಿ ಇಂತಹ ಸಂಗತಿಗಳು ಬೆಳಕಿಗೆ ಬಾರದೆ ತೊಳಲಾಟದಲ್ಲಿ ಕಚೇರಿಯ ಒಳಗಡೆ ನರಳುತ್ತಿವೆ ಆದಷ್ಟು ಬೇಗ ಇಂತಹ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಮುಖಾಂತರ ಬಡಜನರ ಆಶಾಕಿರಣವಾಗಿರುವ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕೆಲಸ ಆಗಬೇಕೆಂಬುದು ನಾಗಮಂಗಲ ತಾಲೂಕಿನ ಪ್ರಜ್ಞಾವಂತ ವಿದ್ಯಾವಂತರ ಕೂಗು ಆಗ್ರಹವಾಗಿದೆ.

ತಾಲೂಕಿನ ಉಸ್ತುವಾರಿ ಸಚಿವರಾದ ಚೆಲುವರಾಯಸ್ವಾಮಿ ಯವರು ಇಂತಹ ಭ್ರಷ್ಟ ವ್ಯವಸ್ತೆಗೆ ಕಡಿವಾಣ ಹಾಕುವ ಮುಖಾಂತರ ಆಡಳಿತ ಸೌಧಕ್ಕೆ ಪಾರದರ್ಶಕವಾದ ವ್ಯವಸ್ಥೆಯನ್ನು ಮಾಡಬೇಕಾಗಿದ್ದು ಇಂತಹ ಅನೇಕ ಸಂಗತಿಗಳು ಹೊರಬೀಳುವ ಮೊದಲೇ ಬಾರಿ ಸರ್ಜರಿ ನೀಡಬೇಕೆಂಬುದು ಜನತೆಯ ಆಗ್ರಹವಾಗಿದೆ.

Related Articles

Leave a Reply

Your email address will not be published. Required fields are marked *

Back to top button