ಇತ್ತೀಚಿನ ಸುದ್ದಿ

ನೂತನವಾಗಿ ನೇಮಕಗೊಂಡ ನಾಮಿನಿ ಪುರಸಭಾ ಸದಸ್ಯರಿಗೆ ಅಭಿನಂದನೆ : ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್

ಮುಂಜಾನೆ ವಾರ್ತೆ ಸುದ್ದಿ: ಕೆ.ಆರ್.ಪೇಟೆ: ಕೆ.ಆರ್.ಪೇಟೆ ಪುರಸಭೆಗೆ ಸರ್ಕಾರಿ ನಾಮಿನಿ ಸದಸ್ಯರಾಗಿ ನೇಮಕಗೊಂಡಿರುವ ನೂತನ ಪುರಸಭಾ ಸದಸ್ಯರಾದ ಕೆ.ಸಿ.ವಾಸು, ಅಜ್ಮತ್ ಉಲ್ಲಾ ಷರೀಫ್, ಕೆ.ಎನ್.ಮಹೇಶ್, ಹೊಸಹೊಳಲು ಹೆಚ್.ಎಂ.ಪುಟ್ಟರಾಜು ಹಾಗೂ ಹೆಚ್.ಕೆ.ಮೋಹನ್ ಬಾಬು ಅವರನ್ನು ಮಾಜಿ ಶಾಸಕರು ಹಾಗೂ ಮಂಡ್ಯ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರೂ ಆದ ಕೆ.ಬಿ.ಚಂದ್ರಶೇಖರ್ ಅವರು ಸನ್ಮಾನಿಸಿ ಗೌರವಿಸಿದರು.
ಬಳಿಕ ಮಾತನಾಡಿದ ಕೆ.ಬಿ.ಚಂದ್ರಶೇಖರ್ ಅವರು ನೂತನ ಸರ್ಕಾರಿ ನಾಮಿನಿ ಸದಸ್ಯರುಗಳಾದ ತಮ್ಮನ್ನು ರಾಜ್ಯ ಸರ್ಕಾರವು ಗುರುತಿಸಿ ಪುರಸಭೆಗೆ ಸದಸ್ಯರನ್ನಾಗಿ ನೇಮಕ ಮಾಡಿದೆ. ಕಾಂಗ್ರೆಸ್ ಪಕ್ಷಕ್ಕೆ ತಾವು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಅವರ ಸಹಕಾರದಿಂದ ರಾಜ್ಯಪಾಲರ ಅನುಮೋದನೆಯೊಂದಿಗೆ ಪುರಸಭೆಗೆ ನಾಮಿನಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಎಲ್ಲಾ ಸಮುದಾಯಕ್ಕೂ ಸಾಮಾಜಿಕ ನ್ಯಾಯ ನೀಡಿ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗದವರಿಗೆ ಆಧ್ಯತೆ ನೀಡಿ ನೇಮಕ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಮಾಜಿಕ ನ್ಯಾಯ ನೀಡಲು ಸಾಧ್ಯ ಎಂಬುದನ್ನು ಈ ನೇಮಕಾತಿಯಿಂದ ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಜವಾಬ್ದಾರಿ ಅರಿತು ಪುರಸಭಾ ಸದಸ್ಯರಾಗಿ ಕೆಲಸ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡಿ ಪಕ್ಷದ ಶಕ್ತಿಯನ್ನು ಹೆಚ್ಚಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸಲಹೆ ನೀಡಿದರು.
ನೂತನ ಸರ್ಕಾರಿ ನಾಮಿನಿ ಸದಸ್ಯರಾದ ಕೆ.ಸಿ.ವಾಸು, ಹೆಚ್.ಎಂ.ಪುಟ್ಟರಾಜು, ಅಜ್ಮತ್ ಉಲ್ಲಾ ಷರೀಫ್, ಕೆ.ಎನ್. ಮಹೇಶ್ ಹಾಗೂ ಹೊಸಹೊಳಲು ಹೆಚ್.ಕೆ.ಮೋಹನ್ ಬಾಬು ಅವರನ್ನು ತಾಲ್ಲೂಕು ಪಂಚಾಯತ್‌ ಮಾಜಿ ಅಧ್ಯಕ್ಷ ಕೆ.ಬಿ.ಈಶ್ವರಪ್ರಸಾದ್, ಕಾಂಗ್ರೆಸ್ ಎಸ್.ಸಿ.ಘಟಕದ ಅಧ್ಯಕ್ಷ ಶಿವಣ್ಣ, ಮಾಜಿ ಅಧ್ಯಕ್ಷರಾದ ಕೆ.ಬಿ.ಮಹೇಶ್ ಕುಮಾರ್, ಹೆಚ್.ವಿ.ಕೃಷ್ಣೇಗೌಡ, ಪ್ರಕಾಶ್, ನಾಗರಾಜು, ಕೆ.ಗೌಸ್ ಖಾನ್, ವಾಸು, ಪುರಸಭಾ ಅಧ್ಯಕ್ಷೆ ಪಂಕಜಪ್ರಕಾಶ್, ಉಪಾಧ್ಯಕ್ಷೆ ಸೌಭಾಗ್ಯ ಉಮೇಶ್, ಸದಸ್ಯರಾದ ಕೆ.ಆರ್.ರವೀಂದ್ರಬಾಬು, ರವೀಂದ್ರಬಾಬು, ಸುಗುಣ ರಮೇಶ್, ಹಾಫೀಜಿಲ್ಲಾ ಷರೀಫ್, ಸಲ್ಲು, ನವೀದ್ ಅಹಮದ್, ಟೌನ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಆಯಾಜ್ ಷರೀಫ್, ರಾಯಸಮುದ್ರ ಧನಂಜಯ್, ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಅಭಿನಂದಿಸಿದ್ದಾರೆ.

ವರದಿ: ಲೋಕೇಶ್.ವಿ

Related Articles

Leave a Reply

Your email address will not be published. Required fields are marked *

Back to top button