
ಪೀಣ್ಯ ದಾಸರಹಳ್ಳಿ: ಆಡಳಿತದಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಇಡೀ ವಿಶ್ವವನೇ ತಿರುಗಿ ನೋಡುವಂತೆ ಬೆಂಗಳೂರು ನಗರವನ್ನು ಕಟ್ಟಿದ ಮಹಾನ್ ನಾಯಕ ನಾಡ ಪ್ರಭು ಕೆಂಪೆಗೌಡರು ಎಂದು ಪರಮ ಪೂಜ್ಯ ಶ್ರೀ ಡಾ. ನಂಜಾವಧೂತ ಮಹಾ ಸ್ವಾಮಿಗಳು ಪೀಠಾಧಿಪತಿಗಳು ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ ಮಠ ಪಟ್ಟನಾಯಕನಹಳ್ಳಿ ಅಭಿಪ್ರಾಯಪಟ್ಟರು.
ಅವರು ನಾಡ ಪ್ರಭು ಕಂಚಿನ ಕೆಂಪೇಗೌಡರ ಸಾಂಸ್ಕೃತಿಕ ವೇದಿಕೆ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಒಕ್ಕಲಿಗರ ಸಂಘ ಸಂಯುಕ್ತ ಆಶ್ರಯದಲ್ಲಿ ಅರುಣ್ ಬೈಲಪ್ಪ ಮತ್ತು ಅವರ ಸ್ನೇಹಿತರು ಆಯೋಜಿಸಿದ್ದ ನಾಡ ಪ್ರಭು ಕೆಂಪೆಗೌಡರ ೫೧೬ ನೇ ಜಯಂತೋತ್ಸವ ಕಾರ್ಯ ಕ್ರಮಕ್ಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಚಿವ ಹಾಲಿ ಶಾಸಕ ಎಸ್ ಟಿ ಸೋಮಶೇಖರ್ ಅವರು ನಾಡ ಪ್ರಭು ಕೆಂಪೆಗೌಡರ ಪ್ರತಿಮೆ ಮಾಲಾರ್ಪಣೆ ಮಾಡಿ ಪೌರ ಕಾರ್ಮಿಕರಿಗೆ ಕಂಬಳಿ ವಿತರಿಸುವ ಮಾತನಾಡಿ ಅವರು ಬೆಂಗಳೂರು ವಿಶಾಲವಾಗಿ ಬೆಳೆ ಬೇಕಾದರೆ ಕೆಂಪೇಗೌಡರ ಪುಣ್ಯ ಎಂದು ಹರ್ಷ ವ್ಯಕ್ತಪಡಿಸಿದರು.
ನಾಡ ಪ್ರಭು ಕಂಚಿನ ಕೆಂಪೇಗೌಡರ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಅರುಣ್ ಬೈಲಪ್ಪ ಸರ್ವರಿಗೂ ಸ್ವಾಗತ ಕೋರಿ ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಜೆಡರಹಳ್ಳಿ ಕೃಷ್ಣಪ್ಪ, ಖ್ಯಾತ ವೈದ್ಯ ಡಾ. ನಾಗೇಶ್ ಕುಮಾರ್, ಕಾಂಗ್ರೆಸ್ ಯುವ ಮುಖಂಡರಾದ ಅವಿನಾಶ್ ಮಾಸ್ತಿ ಬಂಟಿ, ವಿ. ನಾಗರಾಜ್, ಲಿಖಿತ್ ಗೌಡ್ರು, ಶ್ರೀನಿವಾಸ್, ಶ್ರೀಧರ್, ಹನುಮಂತಯ್ಯ, ಎಸ್ ವಿ ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರ್ಕೇಶ್, ಎಂಇಎಸ್ ಸಂಸ್ಥೆಯ ಅಧ್ಯಕ್ಷ ಜೆ.ಎಂ ದೇಶಯ, ಕುಮಾರ್, ಶ್ರೀನಿವಾಸ್, ಮಹಿಳಾ ಮುಖ್ಯಸ್ಥೆ ರಾಜೇಶ್ವರಿ, ಮೇರಿಮ್ಮ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.