
ಬೆಂಗಳೂರು:ಉತ್ತರ, ಬಿದರಹಳ್ಳಿ ಹೋಬಳಿ, ಕೊತ್ತನೂರು ಬಯೋಟ್ರೆಕ್ಸಾ ಗ್ಲೋಬಲ್ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್ ಆಸ್ಪತ್ರೆಯನ್ನು ಸಚಿವರಾದ ಭೈರತಿ ಸುರೇಶ್ ರವರು, ಡಾ||ನಿವೇದಿತಾ ಜಯರಾಮ್, ಡಾ||ಮಂಜುನಾಥ್ ಎಲ್. ನಿರ್ದೇಶಕರು ಸಂಸ್ಥಾಪಕರು, ಡಾ. ಪ್ರಭು ಮೇಘನಾಥನ್ ದೀಪ ಬೆಳಗುವ ಮೂಲಕ ಆಸ್ಪತ್ರೆಯನ್ನು ಲೋಕರ್ಪಣೆ ಮಾಡಿದರು.
ಸಚಿವರಾದ ಭೈರತಿ ಸುರೇಶ್ ಅವರು ಮಾತನಾಡಿ, ವೈದ್ಯ ನಾರಾಯಣ ಹರಿ ಎಂದು ವೈದ್ಯರನ್ನು ದೇವರೆಂದು ಜನರು ನಂಬುತ್ತಾರೆ.
ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಆರೋಗ್ಯ ಬಗ್ಗೆ ಜವಾಬ್ದಾರಿ ವಹಿಸಬೇಕು,ಆರೋಗ್ಯವಂತ ವ್ಯಕ್ತಿಯೆ ನಿಜವಾದ ಶ್ರೀಮಂತ ಎಂದು ಹೇಳಿದರು.
ಆಸ್ಪತ್ರೆ ಡಾ. ನಿವೇದಿತಾ ಜಯರಾಮ್, ಅವರು ಮಾತನಾಡಿ ಇದು ಒಂದು ಆಸ್ಪತ್ರೆಯಲ್ಲಿ ಎಲ್ಲ ವರ್ಗದವರಿಗೂ ಅನುಕೂಲ ಆಗುವಂತಹ ಆರೋಗ್ಯ ಸುರಕ್ಷತೆಯ ಸೂಪರ್ ಸ್ಪೆಷಾಲಿಟಿ ಹಾಗೂ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆ ತಜ್ಞ ವೈದ್ಯರುಗಳ ತಂಡವಿದೆ..
ಈ ಆಸ್ಪತ್ರೆಯಲ್ಲಿ ಫಿಜಿಯೋಥೆರಫಿ, ಡಯಾಲಿಸಿಸ್ ಸೆಂಟರ್, ಕ್ಯಾನ್ಸರ್ ಚಿಕಿತ್ಸೆ ಕಣ್ಣಿನ ತಪಾಸಣೆ, ಇ.ಎನ್.ಟಿ ಹಾಗೂ ಇತರೆ ಎಲ್ಲ ತರಹದ ಚಿಕಿತ್ಸೆ ಸೌಲಭ್ಯವಿದೆ
ಆಸ್ಪತ್ರೆ ಡೈರೆಕ್ಟರ್ ಡಾ. ಮಂಜುನಾಥ್ ಅವರು ಮಾತನಾಡಿ, ಹೆಣ್ಣೂರು, ಕೊತ್ತನೂರು, ಬಾಗಲೂರು, ಏರ್ಪೋರ್ಟ್ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗಲೆಂದು ಇಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದ್ದೇವೆ. ಉದ್ಘಾಟನೆ ಆಗಿರುವ ಆಸ್ಪತ್ರೆಯಲ್ಲಿ ಒಂದೇ ಸೂರಿನ ಅಡಿ ಎಲ್ಲ ರೀತಿಯ ಸ್ಪೆಷಲ್ ಡಾಕ್ಟರು ಇದ್ದಾರೆ. ಬಡವರ ಮಧ್ಯಮ ವರ್ಗದವರಿಗೆ ಎಲ್ಲರಿಗೂ ಅನುಕೂಲವಾಗುವಂತಹ ಈ ಆಸ್ಪತ್ರೆಯಾಗಿದ್ದು ಜನರ ಅನುಕೂಲಕ್ಕೆ ಈ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.