ನಾಗಮಂಗಲದ ನಾಯಕನ ಕೊಪ್ಪಲು 34 ಕುಟುಂಬಗಳ ನ್ಯಾಯ ಕೊಡಿಸುವವರು ಯಾರು..?

ನಾಗಮಂಗಲ :-ಜೀವನಕ್ಕೆ ಆಧಾರವಾಗಿರುವ ಜಮೀನು ಉಳಿಸಿಕೊಡುವಂತೆ ಅಂಗಲಾಚುತ್ತಿರುವ ನಾಯಕನ ಕೊಪ್ಪಲು ಗ್ರಾಮದ 34 ಕುಟುಂಬಗಳು ನ್ಯಾಯ ಕೊಡಿಸಿವಂತೆ ಆ ನೆಲದ ರೈತ ಕುಡಿಗಳ ಆಕ್ರಂದನ ಗೋಳಿನ ಆರೋಪವಾಗಿದೆ
ನಾಗಮಂಗಲ ತಾಲೋಕಿನ ಬೆಳ್ಳೂರು ಹೋಬಳಿಯ ನಾಯಕನ ಕೊಪ್ಪಲು ಗ್ರಾಮದ ಸರ್ವೇ ನಂಬರ್ 45 ರಲ್ಲಿ 18ಎಕರೆ 14ಕುಂಟೆ ಜಮೀನಿನಲ್ಲಿ ಸುಮಾರು ಎರಡು ತಲೆಮಾರುಗಳಿಂದ 34 ಕುಟುಂಬಗಳು ವ್ಯವಸಾಯ ಮಾಡಿಕೊಂಡು ಜೀವನ ನೆಡೆಸುತ್ತಿದ್ದೆವೇ, ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದೇವೆ ಆದರೇ ಹಣ ಮತ್ತು ರಾಜಕೀಯ ಬಲದಿಂದ ಅಕ್ರಮವಾಗಿ ಆರು ಜನರು ಜಮೀನು ಮಂಜೂರು ಮಾಡಿಸಿ ಕೊಂಡಿದ್ದಾರೆ ಆದರೇ ಅವರು ಈ ಸರ್ವೇ ನಂಬರಿನಲ್ಲಿ ಎಂದಿಗೂ ಕೂಡ ಉಳುಮೆ ಮಾಡಿಲ್ಲ.
1945ರ ಪೂರ್ವದಿಂದಲೇ ನಾಯಕನ ಕೊಪ್ಪಲು ಗ್ರಾಮದ 34ಕುಟುಂಬದವರು ನಾವು ಸಾಗುವಳಿ ಮಾಡಿಕೊಂಡು ಬಂದಿದ್ದೇವೆ ನಮ್ಮ ಬದುಕಿಗೆ ಆದರವೇ ಈ ಜಮೀನು ಅಕ್ರಮ ಭೂ ಮಂಜೂರಾತಿ ರದ್ದುಪಡಿಸಿ ಅನುಭವದಲ್ಲಿ ಇರುವವರಿಗೆ ಜಮೀನು ಮಂಜೂರು ಮಾಡಿಕೊಡುವಂತೆ ತಹಸೀಲ್ದಾರ್. ಉಪವಿಭಾಗಧಿಕಾರಿಗಳಿಗೆ. ಮನವಿ ಮಾಡಿಕೊಂಡಿ ದ್ದೇವೆ ಎಂದರು.
ಕಂದಾಯ ಇಲಾಖೆಗೆ ಇದುವರೆಗೂ ರೈತರ ಗೋಳಿನ ಕಥೆ ಮುಟ್ಟಿದರು ಅಧಿಕಾರಿಗಳ ಜಾಣಮನವಾಗಿ ಭೂ ಅಕ್ರಮಗಾರರಿಗೆ ಸಹಕಾರವೇ ಅಥವಾ ಆ ನೆಲದ ಮಣ್ಣಿನ ಮಕ್ಕಳಿಗೆ ನ್ಯಾಯ ಕೊಡುವ ಪ್ರಾಮಾಣಿಕ ಪ್ರಯತ್ನ ಫಲಿಸಬೇಕಾಗಿದೆ
ನಾವುಗಳು ಅನುಭವದಲ್ಲಿ ಇರುವ ಜಮೀನು ಇಷ್ಟು ವರ್ಷಗಳ ಕಾಲ ಸಾಗುವಳಿ ಮಾಡುತ್ತಿದ್ದು ನಮಗೆ ಸಿಗದಿ ದ್ದರೆ ನಾವುಗಳು ಏನು ಮಾಡಬೇಕು ಎಂಬುದು ಕಂದಾಯ ಇಲಾಖೆ ಹೇಳಿ ಇಲ್ಲವಾದರೆ ಊರು ಬಿಟ್ಟು ಹೋಗಬೇಕೆ ಇಲ್ಲವೇ ನ್ಯಾಯ ದೊರಕಿಸಿ ಕೊಡಿ ಎಂಬ ಆಗ್ರಹ ಕೇಳಿ ಬಂದಿದೆ.
ಸುಮಾರು ಎರಡು ತಲೆಮಾರುಗಳಿಂದ ಅನುಭವದಲ್ಲಿ ಇದ್ದವರಿಗೆ ಮುಂಜೂರಾಗದ ಭೂಮಿ.ಅನುಭವದಲ್ಲಿ ಇಲ್ಲದವರಿಗೆ ಅಕ್ರಮವಾಗಿ ಭೂ ಮಂಜೂರು ಮಾಡಿದ್ದಾರೆ ಅಧಿಕಾರಿಗಳು ಎಂದು ಆರೋಪಿಸಿದ ಗ್ರಾಮಸ್ಥರು
ಅಕ್ರಮ ಭೂ ಮಂಜೂರಾತಿ ರದ್ದು ಪಡಿಸಿ ಭೂ ಗಳ್ಳರಿಂದ ನಮ್ಮ ಜಮೀನು ರಕ್ಷಣೆ ಮಾಡಿಕೊಡಿ ಇಲ್ಲವಾದರೆ ವಿಷ ಕುಡಿದು ಸಾಯುವುದು ಸತ್ಯ ಎಂದ ಗ್ರಾಮಸ್ಥರು.