
ವಿಧಾನಸಭಾ ಕ್ಷೇತ್ರದ ವಡಗೇರ ತಾಲೂಕಿನ ಅನವಾರ ಗ್ರಾಮದ ಬಡಕುಟುಂಬಕ್ಕೆ ತಕ್ಷಣ ನೆರವು ಒದಗಿಸಬೇಕೆಂದು ಸಾಮಾಜಿಕ ಹೋರಾಟಗಾರ ಶರಣರೆಡ್ಡಿ ಹತ್ತಿಗೂಡುರ್ ಒತ್ತಾಯಿಸಿದ್ದಾರೆ.
ಅನವಾರ ಗ್ರಾಮದ ಶ್ರೀಮತಿ ಮರಿಯಮ್ಮ (ಮರಿಯಪ್ಪ ಹೊಸಮನಿ ಗ್ರಾಮದ ಮೂಲ ನಿವಾಸಿ) ಅವರ ಮನೆಗೆ ನಿನ್ನೆ ಸುರಿದ ಭಾರಿ ಮಳೆಯಿಂದ ನೀರು ನುಗ್ಗಿ, ಮನೆಯೊಳಗಿನ ದವಸಧಾನ್ಯಗಳು ಹಾಗೂ ವಸ್ತುಗಳು ಸಂಪೂರ್ಣ ಹಾನಿಗೊಳಗಾಗಿವೆ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಈ ಕುಟುಂಬವು ಇದೀಗ ಮಳೆಯಿಂದ ಬೀದಿಗೇ ಬಿದ್ದಂತಾಗಿದೆ.
ಮನೆಯ ಮೇಲ್ಚಾವಣಿ ಹಾಗೂ ಗೋಡೆಗಳು ನೀರಿನಿಂದ ನೆನೆದು ಕುಸಿದು ಬಿದ್ದಿರುವುದರಿಂದ ಕುಟುಂಬವು ಅತೀವ ಸಂಕಷ್ಟಕ್ಕೆ ಸಿಲುಕಿದೆ. ಮಳೆಯಿಂದಾಗಿ ದವಸಧಾನ್ಯಗಳು ನೀರಿನಲ್ಲಿ ಮುಳುಗಿ, ದಿನನಿತ್ಯ ಜೀವನ ನಡೆಸುವುದು ಅಸಾಧ್ಯವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆ ತಾಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ತುರ್ತು ಪರಿಹಾರ ಕ್ರಮ ಕೈಗೊಳ್ಳಿ, ಬಡ ಕುಟುಂಬಕ್ಕೆ ವಸತಿ ವ್ಯವಸ್ಥೆ ಕಲ್ಪಿಸಿಕೊಡಬೇಕು, ತಕ್ಷಣದ ನೆರವಾಗಿ ದವಸಧಾನ್ಯಗಳನ್ನು ವಿತರಿಸಬೇಕು ಎಂದು ಶರಣರೆಡ್ಡಿ ಹತ್ತಿಗೂಡುರ್ ಆಗ್ರಹ ವ್ಯಕ್ತಪಡಿಸಿದ್ದಾರೆ.