ಗ್ರಾಮ ಪರಿಮಿತಿಯ ಸಿ.ಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕರಾದ ಕೆಎಂ ಉದಯ್

ಮದ್ದೂರು ತಾಲ್ಲೂಕು ಸೋಮನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ “ಅರುವನಹಳ್ಳಿ” ಗ್ರಾಮದಲ್ಲಿ ಗ್ರಾಮ ಪರಿಮಿತಿಯ ಸಿ.ಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಗ್ರಾಮಸ್ಥರ ಸಾನ್ನಿಧ್ಯದಲ್ಲಿ ಶಾಸಕರಾದ ಕೆಎಂ ಉದಯ್ ರವರು ಗುದ್ದಲಿ ಪೂಜೆ ನೆರವೇರಿಸಿದರು.
ಮಾನ್ಯ ಮುಖ್ಯಮಂತ್ರಿ ಅವರ ವಿಶೇಷ ಮಂಜೂರಾತಿ ಯೋಜನೆಯಡಿ ಮಳೆ ಪರಿಹಾರ ಅನುದಾನದ ಮೂಲಕ ಈ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಮದ್ದೂರು ಇವರಿಗೆ ಕಾರ್ಯನಿರ್ವಹಣೆಯ ಜವಾಬ್ದಾರಿ ನೀಡಲಾಗಿದೆ. ಈ ಯೋಜನೆಗೆ ಸುಮಾರು ₹16 ಲಕ್ಷಕ್ಕೂ ಹೆಚ್ಚು ವೆಚ್ಚ ನಿರೀಕ್ಷಿಸಲಾಗಿದೆ.
ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಭವಿಷ್ಯದಲ್ಲಿ ಸಮೃದ್ಧ ಹಾಗೂ ಸುಗಮ ಸಂಪರ್ಕಯುಕ್ತ ರಸ್ತೆಯ ಕನಸು ನನಸಾಗುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿ, ಯೋಜನೆಗೆ ತಮ್ಮ ಪೂರ್ಣ ಬೆಂಬಲವನ್ನು ಸೂಚಿಸಿದರು ನಂತರ ಶಾಸಕರು ಶುದ್ದ ನೀರಿನ ಘಟಕವನ್ನು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಶಾಸಕರಾದ ಕೆಎಂ ಉದಯ್ ಗ್ರಾಮ ಪಂಚಾಯತಿ ಸದಸ್ಯರಾದ ಕುಮಾರಿ ಕೆಂಪಯ್ಯ , ಕೆಡಿಪಿ ಸದಸ್ಯರಾದ ಸಿದ್ದರಾಜು ಮುಖಂಡರಾದ ಶ್ರೀನಿವಾಸ್ ಗೌಡ,ಕಿರ್ತಿ ,ಅಪ್ಪರಾಜು ,ಪಿಎಸಿಎಸ್ ನಿರ್ದೇಶಕರಾದ ಗಿರೀಶ್, ಆರ್ ಸಿ ಎಸ್ ಶಿವು ಅರುವನಹಳ್ಳಿ ಗ್ರಾಮದ ಯಜಮಾನರು, ಗ್ರಾಮಸ್ಥರು ಹಾಜರಿದ್ದರು.