
ಅರಸೀಕೆರೆ ನಮ್ಮ ಹಿರಿಯರು ಹಾಗೂ ಗುರುಗಳು ಗ್ರಾಮಗಳಲ್ಲಿ ದೇವಾಲಯಗಳನ್ನು ನಿರ್ಮಿಸಿ ಜಾತ್ರಾ ಮಹೋತ್ಸವಗಳಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಪ್ರೀತಿ ವಿಶ್ವಾಸ ಸೌಹಾರ್ದತೆ ಸಾಮರಸ್ಯ ಬಾಂಧವ್ಯ ಬೆಸೆಯಲು ಧಾರ್ಮಿಕ ಕಾರ್ಯ ಕ್ರಮದ ಮೂಲಕ ಹರಿವು ಮೂಡುಸಿತಿದರು ಎಂದು ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ಸೋಮವಾರ ತಿಳಿಸಿದರು.
ತಾಲೂಕಿನ ಕಣಕಟ್ಟೆ ಹೋಬಳಿಯ ದೈವ ಮೂಲೆ ಎಂದೇ ಹೆಸರುವಾಸಿಯಾಗಿರುವ ಬೊಮ್ಮಸಮುದ್ರ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮದ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಪ್ರಾರಂಭೋತ್ಸವ ಹಾಗೂ ಶಿಖರ ಕಳಶಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಸ್ವಾಮೀಜಿ ಮಾತನಾಡಿದರು.
ಈ ಗ್ರಾಮ ಪುಟ್ಟಗ್ರಾಮವಾದರೂ ಎಲ್ಲಾ ಪಕ್ಷಗಳಿದ್ದರೂ ರಾಜಕೀಯ ಬೆರಸದೆ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಒಗ್ಗೂಡಿ ಇಂತಹ ಕಾರ್ಯಕ್ರಮ ಮಾಡಿರುವುದು ಅಕ್ಕ ಪಕ್ಕದ ಊರುಗಳಿಗೆ ಮಾದರಿಯಾಗಿದೆ.
ಮುಂದೆಯೂ ಸಹ ವದಂತಿಗಳಿಗೆ ಕಿವಿಗೊಡದೆ ಎಲ್ಲರೂ ಇದೇ ರೀತಿ ಸಂಘಟನೆಯಾಗಿ ಒಗ್ಗಟ್ಟಾಗಿ ಹೋದಾಗ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಉತ್ತರ ಅಧಿಕಾರಿ ಚೇತನ್ ಮರಿದೇವರು ಮಾತನಾಡಿ ಮನುಷ್ಯನ ಸುಖ ಸಂತೋಷದ ಬದುಕಿಗೆ ಧರ್ಮಾಚರಣೆ ಮುಖ್ಯ ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ , ಜ್ಞಾನ ದಾಸೋಹದ ಅರಿವು ಹಾಗೂ ಆಚರಣೆ ಮುಖ್ಯ ಎಂದು ಶ್ರೀಗಳು ತಿಳಿಸಿದರು.
ಜೀವನದಲ್ಲಿ ಮನುಷ್ಯ ಒಳ್ಳೆಯ ಮಾತು ಉತ್ತಮ ನಡೆನುಡಿಗಳನ್ನು ಅಳವಡಿಸಿಕೊಂಡು ಆಚರಣೆಗೆ ತಂದಾಗ ಮಾತ್ರ ಜೀವನ ಸಾರ್ಥಕವಾಗಲಿದೆ ಎಂದು ಶ್ರೀಗಳು ತಿಳಿಸಿದರು.
ಕಾಂಗ್ರೆಸ್ ಮುಖಂಡ ಜಿಬಿ ಶಶಿಧರ್ ಮಾತನಾಡಿ ಸರ್ಕಾರಗಳು ಮಾಡದಿರುವ ಕೆಲಸಗಳನ್ನು ಮಠಮಾನ್ಯಗಳು ಮಠಾಧೀಶರು ಮಾಡಿ ಗುರುಕುಲಗಳನ್ನು ತೆರೆದು ಮಕ್ಕಳಿಗೆ ಶಿಕ್ಷಣ ನೀಡಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು ಅದನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು,
ಜೆಡಿಎಸ್ ಮುಖಂಡ ಎನ್ ಆರ್ ಸಂತೋಷ್ ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯುವ ಸಮುದಾಯದ ಕೊರತೆ ಎದ್ದು ಕಾಣುತ್ತಿದೆ ಇಂದಿನ ದಿನಮಾನಗಳಲ್ಲಿ ಸಡಿಲಗೊಳ್ಳುತ್ತಿರುವ ಧಾರ್ಮಿಕ ಭಾವನೆಗಳು ಆತಂಕ ಹುಟ್ಟಿಸುತ್ತಿದೆ ಯುವಕರು ಜ್ಞಾನ ಶಕ್ತಿ ಕ್ರಿಯಾಶೀಲತೆ ಹಾಗೂ ಇಚ್ಛಾಶಕ್ತಿಯನ್ನು ಬೆಳೆಸಿಕೊಂಡರೆ ಜೀವನದಲ್ಲಿ ಏನೆಲ್ಲಾ ಸಾಧನೆ ಮಾಡಬಹುದು ಎಂದು ಅವರು ಸಲಹೆ ನೀಡಿದರು,
ಚಿಕ್ಕನಾಯಕನಹಳ್ಳಿ ತಾಲೂಕು ಬಿಜೆಪಿ ಮಾಜಿ ಶಾಸಕ ಕಿರಣ್ ಕುಮಾರ್,ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮಾಡಾಳು ಎಂ ಎಸ್ ವಿ ಸ್ವಾಮಿ, ಉಪನ್ಯಾಸಕರಾದ ಕೆಎಸ್ ಹರ ಶಿವಮೂರ್ತಿ, ದಿಬ್ಬದಹಳ್ಳಿ ಶಾಮ ಸುಂದರ್ ಮಾತನಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಡಿ ಗೌಡ ಬಿಸಿ ಬಸವರಾಜ್ ವಹಿಸಿದ್ದರು ಸಮಿತಿ ಗೌರವಾಧ್ಯಕ್ಷ ಬಸವರಾಜ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಸ್ ಎಂ ಗಂಗಾಧರ್, ಬಾಣವಾರ ಪಿಎಸ್ಐ ಸುರೇಶ್,
ತಾಲೂಕು ಜೆಡಿಎಸ್ ಅಧ್ಯಕ್ಷ ಕೆಎಸ್ ಚಂದ್ರಶೇಖರ್, ಗ್ರಾ ಪಂ ಸದಸ್ಯ ಕುಂಬಾರಘಟ್ಟ ಚನ್ನಬಸಪ್ಪ,ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಮಹೇಶ್, ಬಿ ಎಂ ಮಲ್ಲಿಕಾರ್ಜುನ, ಶಿಕ್ಷಕ ಯೋಗೀಶ್ ಉಪಸ್ಥಿತರಿದ್ದರು.
ವರದಿ. ಎಂ ಡಿ ನಾಸೀರ್ ಅರಸೀಕೆರೆ



