ಇತ್ತೀಚಿನ ಸುದ್ದಿ

ಆಸ್ಟ್ರೇಲಿಯಾ ದ ಪರ್ತ್ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ

ಆಸ್ಟ್ರೇಲಿಯಾ ದ ಪರ್ತ್ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ,ವೆಸ್ಟರ್ನ್ ಕನ್ನಡ ಸಂಘದ ವತಿಯಿಂದ ನೀಡಲಾಗುವ ಪ್ರತಿಷ್ಠಿತ “ವಿಶ್ವ ಕನ್ನಡ ಕಣ್ಮಣಿ ಪ್ರಶಸ್ತಿ-2025 “ನ್ನು ಕರ್ನಾಟಕದ ಖ್ಯಾತ ಗಾಯಕ ಸಂಗೀತ ನಿರ್ದೇಶಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅವರಿಗೆ ನೀಡಿ ಗೌರವಿಸಲಾಯಿತು.

ಸಂಘದ ಅದ್ಯಕ್ಷ ಶ್ರೀ ಶಂಕರ ಅಳೆಪಡಿ,ಉಪಾಧ್ಯಕ್ಷ ದೇವರಾಜೇಗೌಡ,ಕಾರ್ಯದರ್ಶಿ ಗುರುಗುಪ್ತಾ,ಸಂಘಟನಾ ಕಾರ್ಯದರ್ಶಿ ಪ್ರಸನ್ನ ಗೌಡ,ಖಜಾಂಚಿ,ಶ್ರೀಮತಿ ಅನಲೆ ಶ್ರೀ ರಾಮ್,ಕವಿಗಳಾದ ಶ್ರೀ ಹರ್ಷ ಸಾಲಿಮಠ್,ಪದ್ಮ ಮುಕುಂದರಾಜ್, ಮಮತಾ ಅರಸೀಕೆರೆ ಮುಂತಾದವರು ಉಪಸ್ಥಿತರಿದ್ದರು. ಡಾ.ಕಿಕ್ಕೇರಿ ಕೃ,ಲಿಖಿತ್ ಕೃಷ್ಣ ತಂಡದವರ ಹಾಗೂ ಪರ್ತ್ ಕನ್ನಡ ಸಂಘದ ಕಲಾವಿದರು ಹಾಡಿದ ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಕೋಡಗನ ಕೋಳಿ ನುಂಗಿತ್ತ,ಜನಪರಿಯ ಗೀತೆ, ಹೇಳಿದ್ದುಸುಳ್ಳಾಗಬಹುದು,ಮಲೆನಾಡಿನ್ ಮೂಲೆನಾಗೇ ಇತ್ತೊಂದು ಸೋಮನಳ್ಳಿ,ಕನ್ನಡ ರೋಮಾಂಚನವೀ ಕನ್ನಡ, ವಚನದಲ್ಲಿ ನಾಮಾಮೃತ ತುಂಬಿ ಮುಂತಾದ ಗೀತೆಗಳು ಪ್ರೇಕ್ಷಕರ ಮನಸೂರೆಗೊಂಡಿತು,ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅವರು,ವೆಸ್ಟರ್ನ್ ಕನ್ನಡ ಸಂಘ ನೀಡಿರುವ ಈ ಪ್ರಶಸ್ತಿ ತುಂಬಾ ಸಂತೋಷ ಹಾಗೂ ಜವಾಬ್ದಾರಿ ನೀಡಿದೆ,ಇಲ್ಲಿನ ಸಂಘದ ಪದಾಧಿಕಾರಿಗಳು ಮಾಡುತ್ತಿರುವ ಕನ್ನಡ ಸೇವೆಗೆ ತಾವು ಇಲ್ಲಿನ ಶಾಲಾ ಮಕ್ಕಳಿಗೆ ನಾವು ಈ ಬಾರಿ ಕನ್ನಡ ಪಠ್ಯ ಪುಸ್ತಕಗಳನ್ನು ಉಚಿತವಾಗಿ ನೀಡಿದ್ದೇವೆ,ಮುಂದಿನ ವರ್ಷ ಉಚಿತ ಸುಗಮಸಂಗೀತ ತರಬೇತಿ ಹಾಗೂ ರಂಗ ತರಬೇತಿ ಮತ್ತು ಕನ್ನಡ ಗೀತೆಗಳಿಗೆ ನೃತ್ಯ ತರಬೇತಿಯನ್ನೂ ಉಚಿತವಾಗಿ ನೀಡಿ ಮುಂದಿನ ರಾಜ್ಯೋತ್ಸವ ಹಬ್ಬಕ್ಕೆ ಕನಿಷ್ಠ 200 ಜನ ಆಸಕ್ತರಿಗೆ ವೇದಿಕೆ ಕಲ್ಪಿಸಲಾಗುವುದು ಎಂದರು.ವಿಶೇಷವಾಗಿ ಚಂದ್ರು ಮದ್ದೂರು,ಆತಿಥ್ಯ, ಪ್ರಸನ್ನಗೌಡ ಚಿಕ್ಕ ಮಗಳೂರು,ಹಾಗೂ ಅಧ್ಯಕ್ಷ ಶಂಕರ್ ಅವರ ತಂಡದ ಕನ್ನಡ ಸೇವೆ ಅನುಕರಣೀಯ ಹಾಗೂ ಶ್ಲಾಘನೀಯ ಎಂದರು.

Related Articles

Leave a Reply

Your email address will not be published. Required fields are marked *

Back to top button