ಇತ್ತೀಚಿನ ಸುದ್ದಿ

100% ದರ ಏರಿಕೆಯಾದ ಕಡೆ ಕೇವಲ 10 ರೂ. ಇಳಿಕೆ – 50% ಹೇಳಿ 70% ಏರಿಸಿದ BMRCL | ಹಿಂದೆ ಎಷ್ಟಿತ್ತು? ಈಗ ಎಷ್ಟು ಇಳಿಕೆ?

ಬೆಂಗಳೂರು: ಪ್ರಯಾಣಿಕರ ಆಕ್ರೋಶಕ್ಕೆ ಮಣಿದ ಬಿಎಂಆರ್‌ಸಿಎಲ್‌ (BMRCL) ಕೊಂಚ ಮೆಟ್ರೋ (Namma Metro) ಪ್ರಯಾಣ ದರ ಇಳಿಕೆ ಮಾಡಿ ಸೇಫ್‌ ಗೇಮ್‌ ಪ್ಲೇ ಮಾಡಿದೆ.

ಪ್ರಯಾಣ ದರ 80% ರಿಂದ 100% ಏರಿಕೆ ಆಗಿರುವ ಕಡೆ ಕೇವಲ 10 ರೂ. ಇಳಿಸಿ ಪ್ರಯಾಣಿಕರ ಮೂಗಿಗೆ ತುಪ್ಪ ಸವರಿದೆ. ಮಾಧ್ಯಮಗಳಲ್ಲಿ 50% ಹೆಚ್ಚಳ ಎಂದು ಪ್ರಕಟಣೆ ನೀಡಿ 100% ದರವನ್ನು ಏರಿಸಿದ ಬಿಎಂಆರ್‌ಸಿಎಲ್‌ ಈಗ ಅದರಲ್ಲಿ 30% ಇಳಿಕೆ ಮಾಡಿದೆ. ಆದರೆ ಕನಿಷ್ಟ 10 ರೂ. ಗರಿಷ್ಟ 90 ರೂ. ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಈ ವಿಚಾರದ ಬಗ್ಗೆ ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯೆ ನೀಡಿದ ವಿದ್ಯಾರ್ಥಿಗಳು, 50% ಏರಿಕೆ ಅಂತ ಹೇಳಿ 100% ಏರಿಸಿ ಮತ್ತೆ 70%ಕ್ಕೆ ಇಳಿಸಿದ್ದಾರೆ. ಇದು ಯಾವ ಲೆಕ್ಕ? ಇದರಿಂದ ವಿದ್ಯಾರ್ಥಿಗಳಿಗೆ ಇದು ಕಷ್ಟ ಆಗಲಿದೆ ಎಂದು ಬೇಸರ ಹೊರ ಹಾಕಿದ್ದಾರೆ.

ಕೆಲವು ಕಡೆ 70% ದರ ಏರಿಕೆಯಾಗಿದ್ದರೂ ಮತ್ತೆ ಮೆಟ್ರೋ ಟಿಕೆಟ್ ದರದಲ್ಲಿ ಬದಲಾವಣೆಯಾಗುವುದು ಅನುಮಾನ. ಮತ್ತೆ ಮತ್ತೆ ದರ ಕಡಿಮೆ‌ ಮಾಡಲು ಸಾಧ್ಯವಿಲ್ಲ. ದರ ಪರಿಷ್ಕರಣೆ ಸಮಿತಿಯಂತೆ ದರ ಏರಿಕೆ‌ ಮಾಡಲಾಗಿದೆ. ಸ್ಟೇಜ್, ಕೆಲ ಸ್ಲಾಬ್ ನಲ್ಲಿ ಕೆಲ ತಪ್ಪುಗಳಾಗಿತ್ತು. ತಪ್ಪು ಸರಿ ಮಾಡಿಕೊಂಡು ಇಂದಿನಿಂದ ದರ ಬದಲಾಯಿಸಲಾಗಿದೆ. ಯಾವುದೇ ಕಾರಣಕ್ಕೂ ಮತ್ತೆ ಟಿಕೆಟ್ ದರ ಕಡಿಮೆ ಮಾಡುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ಉನ್ನತ ಮೂಲಗಳು ಪಬ್ಲಿಕ್‌ ಟಿವಿಗೆ ತಿಳಿಸಿವೆ.

ಬೆಂಗಳೂರು:
 ಪ್ರಯಾಣಿಕರ ಆಕ್ರೋಶಕ್ಕೆ ಮಣಿದ ಬಿಎಂಆರ್‌ಸಿಎಲ್‌ (BMRCL) ಕೊಂಚ ಮೆಟ್ರೋ (Namma Metro) ಪ್ರಯಾಣ ದರ ಇಳಿಕೆ ಮಾಡಿ ಸೇಫ್‌ ಗೇಮ್‌ ಪ್ಲೇ ಮಾಡಿದೆ.

ಪ್ರಯಾಣ ದರ 80% ರಿಂದ 100% ಏರಿಕೆ ಆಗಿರುವ ಕಡೆ ಕೇವಲ 10 ರೂ. ಇಳಿಸಿ ಪ್ರಯಾಣಿಕರ ಮೂಗಿಗೆ ತುಪ್ಪ ಸವರಿದೆ. ಮಾಧ್ಯಮಗಳಲ್ಲಿ 50% ಹೆಚ್ಚಳ ಎಂದು ಪ್ರಕಟಣೆ ನೀಡಿ 100% ದರವನ್ನು ಏರಿಸಿದ ಬಿಎಂಆರ್‌ಸಿಎಲ್‌ ಈಗ ಅದರಲ್ಲಿ 30% ಇಳಿಕೆ ಮಾಡಿದೆ. ಆದರೆ ಕನಿಷ್ಟ 10 ರೂ. ಗರಿಷ್ಟ 90 ರೂ. ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Advertisement

ಈ ವಿಚಾರದ ಬಗ್ಗೆ ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯೆ ನೀಡಿದ ವಿದ್ಯಾರ್ಥಿಗಳು, 50% ಏರಿಕೆ ಅಂತ ಹೇಳಿ 100% ಏರಿಸಿ ಮತ್ತೆ 70%ಕ್ಕೆ ಇಳಿಸಿದ್ದಾರೆ. ಇದು ಯಾವ ಲೆಕ್ಕ? ಇದರಿಂದ ವಿದ್ಯಾರ್ಥಿಗಳಿಗೆ ಇದು ಕಷ್ಟ ಆಗಲಿದೆ ಎಂದು ಬೇಸರ ಹೊರ ಹಾಕಿದ್ದಾರೆ.

Advertisement
Advertisement

ಕೆಲವು ಕಡೆ 70% ದರ ಏರಿಕೆಯಾಗಿದ್ದರೂ ಮತ್ತೆ ಮೆಟ್ರೋ ಟಿಕೆಟ್ ದರದಲ್ಲಿ ಬದಲಾವಣೆಯಾಗುವುದು ಅನುಮಾನ. ಮತ್ತೆ ಮತ್ತೆ ದರ ಕಡಿಮೆ‌ ಮಾಡಲು ಸಾಧ್ಯವಿಲ್ಲ. ದರ ಪರಿಷ್ಕರಣೆ ಸಮಿತಿಯಂತೆ ದರ ಏರಿಕೆ‌ ಮಾಡಲಾಗಿದೆ. ಸ್ಟೇಜ್, ಕೆಲ ಸ್ಲಾಬ್ ನಲ್ಲಿ ಕೆಲ ತಪ್ಪುಗಳಾಗಿತ್ತು. ತಪ್ಪು ಸರಿ ಮಾಡಿಕೊಂಡು ಇಂದಿನಿಂದ ದರ ಬದಲಾಯಿಸಲಾಗಿದೆ. ಯಾವುದೇ ಕಾರಣಕ್ಕೂ ಮತ್ತೆ ಟಿಕೆಟ್ ದರ ಕಡಿಮೆ ಮಾಡುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ಉನ್ನತ ಮೂಲಗಳು ಪಬ್ಲಿಕ್‌ ಟಿವಿಗೆ ತಿಳಿಸಿವೆ.

Advertisement

ಮೊದಲು ಯಶವಂತಪುರ ಮೆಟ್ರೋದಿಂದ ಮೆಜೆಸ್ಟಿಕ್ ನಿಲ್ದಾಣಕ್ಕೆ 25 ರೂ. ಇತ್ತು. ಪರಿಷ್ಕರಣೆಯಾದ ನಂತರ ದರ 50 ರೂ.ಗೆ ಏರಿಕೆಯಾಗಿತ್ತು. ಈಗ ಮರು ಪರಿಷ್ಕರಣೆ ಬಳಿಕ 40 ರೂ.ಗೆ ಇಳಿಕೆಯಾಗಿದೆ. ಪರಿಷ್ಕರಣೆಯಾಗುವ ಮೊದಲಿದ್ದ ದರಕ್ಕೆ ಹೋಲಿಸಿದರೆ  ಸುಮಾರು 60%  ಏರಿಕೆ ಮಾಡಲಾಗಿದೆ.

ದರ ಎಷ್ಟು ಕಡಿಮೆಯಾಗಿದೆ?
1. ರಾಜಾಜಿನಗರ – ಲಾಲ್ ಬಾಗ್
ಹಿಂದಿನ ದರ : 50 ರೂ
ಇಂದಿನ ದರ : 40 ರೂ.

2. ಪೀಣ್ಯ-ಸೆಂಟ್ರಲ್ ಕಾಲೇಜ್
ಹಿಂದಿನ ದರ : 60 ರೂ.
ಇಂದಿನ ದರ : 50 ರೂ.

Related Articles

Leave a Reply

Your email address will not be published. Required fields are marked *

Back to top button