ಇತ್ತೀಚಿನ ಸುದ್ದಿ
Trending

ಕರ್ನಾಟದಲ್ಲಿ ಮುಸ್ಲಿಂ ಮೀಸಲಾತಿ; "ಐ ಚಾಲೆಂಜ್‌ ಟು.." ಯೋಗಿ ಆದಿತ್ಯನಾಥ್‌ ಬಿಗ್‌ ಸ್ಟೇಟ್‌ಮೆಂಟ್!‌

ಹೊಸದಿಲ್ಲಿ: ಕರ್ನಾಟಕ ಸರ್ಕಾರವು ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ಘೋಷಣೆ ಮಾಡಿರುವುದನ್ನು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರವಾಗಿ ಖಂಡಿಸಿದ್ದಾರೆ.ಮಾಧ್ಯಮ ಸಂಸ್ಥೆ ಎಎನ್‌ಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಯೋಗಿ ಆದಿತ್ಯನಾಥ್‌, “ಕರ್ನಾಟಕ ಕಾಂಗ್ರೆಸ್‌ ಸರ್ಕಾರದಮ ಮುಸ್ಲಿಂ ಮೀಸಲಾತಿ ನಿರ್ಧಾರ ಸಂವಿಧಾನ ವಿರೋಧಿ..”ಎಂದು ಕಿಡಿಕಾರಿದರು.”ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವೇ ಇಲ್ಲ. ಆದರೆ ಕಾಂಗ್ರೆಸ್‌ ತನ್ನ ತುಷ್ಟೀಕರಣ ರಾಜನೀತಿಯ ಭಾಗವಾಗಿ, ಮುಸ್ಲಿಮರನ್ನು ಓಲೈಸಲು ಸಂವಿಧಾನವನ್ನು ತಿರುಚುವ ಮಟ್ಟಕ್ಕೆ ಇಳಿಯುತ್ತದೆ. ಇದಕ್ಕೆ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಜಾರಿ ಮಾಡಿರುವ ಸರ್ಕಾರಿ ಗುತ್ತಿಗೆ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಯೋಜನೆಯೇ ಜ್ವಲಂತ ಉದಾಹರಣೆ..” ಎಂದು ಯೋಗಿ ಆದಿತ್ಯನಾಥ್‌ ತೀವ್ರ ವಾಗ್ದಾಳಿ ನಡೆಸಿದರು.”ಕರ್ನಾಟಕ ಸರ್ಕಾರವು ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಿರುವುದು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನಕ್ಕೆ ಮಾಡಿದ ಅವಮಾನವಲ್ಲದೇ ಬೇರೆನೂ ಅಲ್ಲ. ಕಾಂಗ್ರೆಸ್‌ನವರು ಈಗ ಮಾತೆತಿದ್ದರೆ ಸಂವಿಧಾನ ಅಪಾಯದಲ್ಲಿದೆ, ಸಂವಿಧಾನವನ್ನು ನಾವು ರಕ್ಷಣೆ ಮಾಡುತ್ತೆವೆ ಎಂದು ಬೊಬ್ಬೆ ಹೊಡೆಯುತ್ತಾರೆ. ಆದರೆ ಮತ್ತೊಂದು ಕಡೆ ಧರ್ಮಾಧಾರಿತ ಮೀಸಲಾತಿ ಘೋಷಿಸಿ, ಅದೇ ಸಂವಿಧಾನಕ್ಕೆ ಅಪಮಾನ ಮಾಡುತ್ತಾರೆ. ಕಾಂಗ್ರೆಸ್‌ನ ಈ ದ್ವಂದ್ವ ನೀತಿ ನಿಜಕ್ಕೂ ಖಂಡನೀಯ..” ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆಕ್ರೋಶ ಹೊರಹಾಕಿದರು.

1952ರಿಂದ ಬಾಬಾ ಸಾಹೇಬರು ರಚಿಸಿದ ಸಂವಿಧಾನವನ್ನು ನಿರಂತರವಾಗಿ ತಿದ್ದುಪಡಿ ಮಾಡುವ ಮೂಲಕ, ಕಾಂಗ್ರೆಸ್‌ ಸಂವಿಧಾನಕ್ಕೆ ಮತ್ತು ಅಂಬೇಡ್ಕರ್‌ ಅವರಿಗೆ ಅಪಮಾನ ಮಾಡುತ್ತಲೇ ಬರುತ್ತಿದೆ. ಆದರೆ ಈಗ ಅಧಿಕಾರಕ್ಕಾಗಿ ಆ ಪಕ್ಷದ ನಾಯಕರು ಸಂವಿಧಾನವನ್ನು ತಲೆ ಮೇಲೆ ಹೊತ್ತು ತಿರುಗಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ಸಂವಿಧಾನದ ಮೇಲೆ ನಿಜಕ್ಕೂ ಅಷ್ಟೊಂದು ಕಾಳಜಿ ಇದ್ದರೆ, ಕರ್ನಾಟಕದಲ್ಲಿ ಜಾರಿಯಾಗಿರುವ ಮುಸ್ಲಿಂ ಮೀಸಲಾತಿಯನ್ನು ಹಿಂಪಡೆಯುವಂತೆ ಅಲ್ಲಿನ ಸರ್ಕಾರಕ್ಕೆ ಸೂಚನೆ ನೀಡಲಿ..” ಎಂದು ಯೋಗಿ ಆದಿತ್ಯನಾಥ್‌ ಇದೇ ವೇಳೆ ಸವಾಲೆಸೆದರು.‌ಎಎನ್‌ಐ ಸಂದರ್ಶನದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಧಾರ್ಮಿಕ ಸಾಮರಸ್ಯದ ಕುರಿತು ಸುದೀರ್ಘವಾಗಿ ಮಾತನಾಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಬಿಜೆಪಿ ಆಡಳಿತಾವಧಿಯಲ್ಲಿ ಸಂವಿಧಾನ ಅಪಾಯದಲ್ಲಿದೆ ಎಂಬ ಕಾಂಗ್ರೆಸ್‌ ಆರೋಪವನ್ನು ಖಂಡತುಂಡವಾಗಿ ನಿರಾಕರಿಸಿದರು.

“ಸಂವಿಧಾನ ಅಪಾಯದಲ್ಲಿದೆ ಎಂಬುದು ಕಾಂಗ್ರೆಸ್‌ ಹರಡುತ್ತಿರುವ ಸುಳ್ಳು ಪ್ರಚಾರ. ಅಸಲಿಗೆ ಡಾ. ಅಂಬೇಡ್ಕರ್‌ ಅವರು ಕೊಟ್ಟಿರುವ ಈ ಸಂವಿಧಾನದ ಮೇಲೆ ಕಾಂಗ್ರೆಸ್‌ ಮಾಡಿದಷ್ಟು ದಾಳಿಯನ್ನು ಬೇರೆ ಯಾರೂ ಮಾಡಿಲ್ಲ. ಸ್ವಾತಂತ್ರ್ಯಾನಂತರದ ಭಾರತದ ಇತಿಹಾಸವನ್ನು ನೋಡಿದಾಗ, ನಮಗೆ ಈ ಸತ್ಯದ ಅರಿವಾಗುತ್ತದೆ. ಬಿಜೆಪಿ ಡಾ. ಅಂಬೇಡ್ಕರ್‌ ರಚಿತ ಸಂವಿಧಾನದ ರಕ್ಷಣೆ ಮಾಡುತ್ತಿದೆ. ಇದು ಪಕ್ಷದ ಪ್ರಾಥಮಿಕ ಜವಾಬ್ದಾರಿ ಕೂಡ ಹೌದು..” ಎಂದು ಯುಪಿ ಸಿಎಂ ಸ್ಪಷ್ಟಪಡಿಸಿದರು.ಇನ್ನು ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ್ದಾರೆ ಎನ್ನಲಾದ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ವಿರುದ್ಧವೂ ಗುಡುಗಿರುವ ಯೋಗಿ ಆದಿತ್ಯನಾಥ್‌, “ಬಿಜೆಪಿ ಇರೋವರೆಗೂ ಯಾರೂ ಕೂಡ ಸಂವಿಧಾನವನ್ನು ಮುಟ್ಟಲು ಸಾಧ್ಯವಿಲ್ಲ..” ಎಂದು ಹರಿಹಾಯ್ದಿದ್ದಾರೆ. ಡಿಕೆಶಿ ಅವರ ಹೇಳಿಕೆ ಕಾಂಗ್ರೆಸ್‌ನ ಗುಪ್ತ ಅಜೆಂಡಾವನ್ನು ಬಹಿರಂಗಗೊಳಿಸಿದ್ದು, ಈಗಲಾದರೂ ಈ ದೇಶದ ಜನ ಎಚ್ಚೆತ್ತುಕೊಳ್ಳಬೇಕು. ಸಂವಿಧಾನದ ಭಕ್ಷಕರು ಯಾರು, ಸಂವಿಧಾನದ ರಕ್ಷಕರು ಯಾರು ಎಂಬುದನ್ನು ಜನತೆ ಅರಿಯಬೇಕು..” ಎಂದು ಯೋಗಿ ಆದಿತ್ಯನಾಥ್ ಮನವಿ ಮಾಡಿದ್ದಾರೆ.


Related Articles

Leave a Reply

Your email address will not be published. Required fields are marked *

Back to top button